ಸೆಕೆಯ ನಡವೆಯೂ ಉತ್ತಮ ಸೆಕ್ಸ್ ಅನುಭವಿಸಲು ಇಲ್ಲಿದೆ ಕೆಲವು ಸಲಹೆ

ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಸೆಕೆ ಇರುವ ಕಾರಣ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅಷ್ಟೊಂದು ಆಸಕ್ತಿ ಇರುವುದಿಲ್ಲ. ಈ ಬಿಸಿಲಿನ ಬೇಸಿಗೆಯಲ್ಲಿಯೂ ನೀವು ಸಂಗಾತಿ ಜೊತೆ ಉತ್ತಮವಾಗಿ ಸಂಬಂಧ ಬೆಳಸಬೇಕೆಂದರೆ ಇಲ್ಲಿ ಕೆಲವು ಸಲಹೆಗಳನ್ನು ಓದಿ.

ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಐಸ್ ಕ್ಯೂಬ್ ಬಳಸಿ:
ಐಸ್ ಕ್ಯೂಬ್‌ನ್ನು ಕೈಯಿಂದ ಅಥವಾ ಬಾಯಿಯಿಂದ ಸಂಗಾತಿಯ ದೇಹದ ಮೇಲೆ ನಯವಾಗಿ ಸವರಿ. ಹೀಗೆ ಮಾಡುವುದರಿಂದ ಸೆಕೆಯಿಂದ ಮುಕ್ತಿ ಪಡೆದು ಸೆಕ್ಸ್‌ನಲ್ಲಿ ತೊಡಗಲು ಅನುಕೂಲವಾಗುತ್ತದೆ.

ಈಜು ಕೊಳದಲ್ಲಿ ವಿಭಿನ್ನ ರೀತಿಯ ಫನ್‌:
ಬೇಸಿಗೆ ಕಾಲದಲ್ಲಿ ರತಿಕ್ರೀಡೆ ಆಡುವ ಸಂದರ್ಭದಲ್ಲಿ ತಂಪಿನ ನಿಜವಾದ ಅನುಭವ ಪಡೆಯಬೇಕೆಂದಿದ್ದರೆ, ಬೆಡ್ ರೂಮ್‌ಗಿಂತ ಸ್ವಿಮಿಂಗ್ ಫೂಲ್ ಉತ್ತಮ. ಇಲ್ಲಿ ಸೆಕ್ಸ್‌ನ ಉತ್ತಮ ಅನುಭವ ಸವಿಯಬಹುದಾಗಿದ್ದು, ವಿಭಿನ್ನ ರೀತಿಯ ಫನ್ ಸಹ ಎಂಜಾಯ್ ಮಾಡಬಹುದು.

ಶಾವರ್
‌ನಲ್ಲಿ ಹೆಚ್ಚುತ್ತೆ ಪ್ರೀತಿ:
ಜೋಡಿಗಳು ಶಾವರ್‌ನಲ್ಲಿ ಸಂಭೋಗ ಕ್ರಿಯೆಯಲ್ಲಿ ತೊಡಗುವುದರಿಂದ ಅವರಲ್ಲಿ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲಿ ತುಂಟಾಟದಲ್ಲಿ ತೊಡಗುವುದರಿಂದ ಟ್ರೆಸ್ ಕೂಡ ಕಡಿಮೆ ಆಗುತ್ತದೆ ಎಂದು ಬಹುತೇಕ ಜೋಡಿಗಳು ಹೇಳಿಕೊಂಡಿವೆ.

ತಂಪಾದ ನೆಲವನ್ನೇ ಆಯ್ಕೆ ಮಾಡಿ:
ಬೇಸಿಗೆ ಸಮಯದಲ್ಲಿ ತಂಪಾದ ನೆಲದ ಮೇಲೆಯೇ ಸೆಕ್ಸ್‌ನಲ್ಲಿ ತೊಡಗುವುದು ಉತ್ತಮವಾಗಿದೆ. ಇದರಿಂದ ಜೋಡಿಯ ಬಾಡಿ ಹಿಟ್ ಕಂಟ್ರೋಲ್‌ಗೆ ಬಂದು ಕೂಲ್ ಸೆಕ್ಸ್‌ನ ಮಜಾ ಪಡೆಯಬಹುದು. ಈ ರೀತಿಯ ಸೆಕ್ಸ್ ಜೋಡಿಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ.